ಮಕ್ಕಳ ಬೆರಳು ಚೀಪುವಿಕೆ
ನಾವು ಕಂಡಂತೆ ಸಾಮಾನ್ಯವಾಗಿ ಸಣ್ಣ ಪಾಪುಗಳು ಬಾಯಿಗೆ ಬೆರಳು ಹಾಕುವದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಸುಮಾರು ೨೦% ಚಿಕ್ಕ ಮಕ್ಕಳು ಬೆರಳನ್ನು ಚೀಪುವುದನ್ನು ನಂತರದಲ್ಲೂ ಮುಂದುವರೆಸಿರುತ್ತಾರೆ. ಕೆಲವು ಮಕ್ಕಳು ಹೆಬ್ಬೆಟ್ಟನ್ನು ಚೀಪಿದರೆ, ಕೆಲ ಮಕ್ಕಳು ತೋರುಬೆರಳು, ಕಿರಿಬೆರಳುಗಳನ್ನೂ ಚೀಪುವುದು ಮಾಡುತ್ತಾರೆ. ಹೇಗೆ ಮಗು ಈ ಅಭ್ಯಾಸವನ್ನು ಕಲಿಯುತ್ತದೆ? ಬೆರಳು ಚೀಪುವುದು ಒಳ್ಳೆಯದೇ ಕೆಟ್ಟದ್ದೇ? ನಾವು ಮಾಡಬೇಕಾದ್ದೇನು? ತಪ್ಪಿಸಲು ಮಾಡುವ ಪ್ರಯತ್ನಗಳು ಇತರ ವಿಷಯಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ. ಬೆರಳು ಚೀಪುವ ಕಲಿಕೆ ಹೇಗೆ ಮತ್ತು ಯಾಕೆ? ಮಕ್ಕಳಲ್ಲಿ ಚೀಪುವ ಕ್ರಿಯೆ ಆ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಪ್ರಾರಂಭವಾಗಿರುತ್ತದೆ. ಜನನದ ನಂತರದಲ್ಲಿ ಸ್ತನ್ಯಪಾನ ಮಾಡುವ ಕೌಶಲ್ಯವನ್ನು ಹೊಂದಿರುವ ಮಗು ಅದೇ ಪ್ರಕಾರದಲ್ಲಿ, ತನ್ನ ಬಾಯನ್ನು ಮತ್ತು ನಾಲಿಗೆಯನ್ನು ಬಳಸಿ ಪ್ರತಿಯೊಂದು ವಸ್ತುವನ್ನು ಜೋರಾಗಿ ಜೀಪುವ (urge) ಸತತ ಪ್ರಯತ್ನದಲ್ಲಿರುತ್ತದೆ. ತಮ್ಮ ಕೈ, ಕೈ ಬೆರಳುಗಳು, ಆಡಿಸುತ್ತಾ ಬಾಯಿಯ ಬಳಿ ಸಿಕ್ಕ ಕಾಲು ಎಲ್ಲವನ್ನೂ ಇದೇ ರೀತಿಯಲ್ಲಿ ಬಾಯಿಗೆ ಹಾಕಲು ಪ್ರಯತ್ನಿಸಿರುತ್ತದೆ. ಒಂದು ಸರಿ ತಮ್ಮ ಕೈಯ ಬೆರಳುಗಳ ಚೀಪುವಿಕೆಯನ್ನು ಕಂಡುಕೊಂಡ ಮೇಲೆ, ಮಗುವು ಅದನ್ನು ತನ್ನ ಆರಾಮಕ್ಕಾಗಿ ಮತ್ತೆ ಮತ್ತೆ ಬಳಸಲು ಪ್ರಯತ್ನಿಸುತ್ತದೆ. ಒ...