ನೀವು ಪ್ರವಾಸಿಗರೇ?
ಮಕ್ಕಳಿಗೆ, ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಕ್ರಿಸ್ತ್ಮಸ್ ರಜೆಯ ಸುಗ್ಗಿ.. ನೀವೀಗಾಗಲೇ ಯಾವುದಾದರೂ ಸ್ಥಳಕ್ಕೆ ಟ್ರಿಪ್ ಪ್ಲಾನ್ ಮಾಡಿರುತ್ತೀರಿ. ಓಡಾಡುವ ಸ್ಥಳದ ಕುರಿತಾಗಿ ಒಂದಷ್ಟು ಮಾಹಿತಿ, ಓಡಾಡಲು ವಾಹನದ ವ್ಯವಸ್ಥೆ, ಅಲ್ಲಿ ಉಳಿಯಲು ಬೇಕಾದ ಹೋಟೆಲ್ಲು, ಹೋಂಸ್ಟೇ ಗಳ ವ್ಯವಸ್ಥೆ, ಟ್ರಿಪ್ನ ವೇಳೆ, ಹೊಟ್ಟೆ-ಬಟ್ಟೆಗಾಗಿ ಒಂದಷ್ಟು ಅವಶ್ಯಕತೆಯ ವಸ್ತುಗಳ ಶಾಪಿಂಗ್, ಆಟ-ಮೋಜು-ಮಸ್ತಿಗಾಗಿ ಬೇಕಾಗುವ ವಸ್ತುಗಳು, ಓಡಾಡಿದ ಸ್ಥಳದ ನೆನಪಿಗಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು ಮೊಬೈಲ್ , ಕ್ಯಾಮೆರಾ ಹೀಗೆ ಪ್ರವಾಸದ ಕುರಿತಾಗಿ ಸಾಕಷ್ಟು ಯೋಜನೆ ಮತ್ತು ತಯಾರಿ ನಡೆಸುತ್ತೀರಿ ಅಲ್ಲವೇ? ಕಡೆಗೂ ಬಯಸಿದ ಸ್ಥಳಕ್ಕೆ ಪ್ರವಾಸ ಕೈಗೊಂಡು ಸಂಚಾರ ಮಾಡಿ, ಆಟವಾಡಿ, ತಿಂದು-ಕುಡಿದು,ಸಂತೋಷ ಪಡುತ್ತೀರಿ. "ಭಾರೀ ಲಾಯ್ಕ್ ಇತ್ತು ನಮ್ಮ ಟ್ರಿಪ್" ಎಂದು ಇತರರೊಡನೆ ಹೇಳಿ, ಫೋಟೋ ತೋರಿಸಿ ಬೀಗುತ್ತೀರಿ.. ಹೀಗೆ ನಮ್ಮ ಲೆಕ್ಕದಲ್ಲಿ, 'ಪ್ರವಾಸವೊಂದು ಯಶಸ್ವಿಯಾಗಿತ್ತು' ಎಂಬುದು ನಾವು ಅರಿತ ಹೊಸ ವಿಷಯಗಳು, ಕಂಡು-ಅನುಭವಿಸಿದ ಸಂತೋಷ ಮತ್ತು ಮೋಜು, ಮತ್ತೊಂದಷ್ಟು ಫೋಟೋಗಳ ಕುರಿತಾಗಿಯಾಗಿರುತ್ತದೆ. ಆದರೆ ಸ್ನೇಹಿತರೆ, ನಮ್ಮ ಟ್ರಿಪ್ ಯಶಸ್ವಿ ಮತ್ತು ಅರ್ಥಪೂರ್ಣವಾಗಿತ್ತು ಎಂಬುದರ ಮಾನದಂಡ ನಾವು...