ಹಿಮಾಲಯದ ಪರ್ವತ ಶ್ರೇಣಿಗಳೆಂದರೆ ನನಗೇಕೋ ಮುಗಿಯದ ಆಸೆ. ಈ ಸಲದ ಪ್ರವಾಸಕ್ಕೆ ನಮ್ಮ ಗಮನ ಸೆಳೆದದ್ದು ಪಶ್ಚಿಮ ಬಂಗಾಳ.
ದಾರ್ಜೀಲಿಂಗ್ ಒಂದು ಅತ್ಯಂತ ಸುಂದರವಾದ ಗಿರಿಧಾಮ, ಹಿಮಾಲಯದ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಇರುವ ಈ ಪಟ್ಟಣ, ಯುನೆಸ್ಕೋ ದ ವಿಶ್ವ ಪರಂಪರೆಯ ತಾಣದಲ್ಲಿ ಒಂದು. ಪ್ರವಾಸಿಗರಾಗಿ ಈ ಪ್ರದೇಶದ ಸೌಂದರ್ಯವನ್ನು ಸವಿಯಬೇಕೆಂದರೆ, ಡಿಸೇಂಬರ್ ನಂತರದ ಹಿಮಸುರಿತವನ್ನು ಅನುಭವಿಸಬೇಕು ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೆವು. ಆದರೂ ವರ್ಷವಿಡೀ ಮಂಜು ಕವಿದಿರುವ ಊರು, ಹಿಮಾಲಯದ ಮಹೋನ್ನತ ಶ್ರೇಣಿಯ ಪ್ರದೇಶ ಎಂಬ ಅರಿವಿದ್ದರಿಂದ, ಈ ಸಮಯಕ್ಕೆ ಕಾಣಸಿಗುವ ವೈವಿದ್ಯತೆಯನ್ನು ನೋಡಲು ನಾವು ತಯಾರಾಗಿಯೇ ಹೋಗಿದ್ದೆವು.
ದಾರ್ಜೀಲಿಂಗ್ ಅನ್ನು ಹೆಚ್ಚು ಕಮ್ಮಿ ಬ್ರಿಟಿಷರು ಕಟ್ಟಿದ ನಾಡು ಎಂದೇ ಹೇಳಬಹುದು. ದಾರ್ಜೀಲಿಂಗ್ ನ ಉತ್ತಮ ಹವಾಗುಣದಿಂದ ಆಕರ್ಷಿತವಾಗಿ, ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ನಿಯೋಗ, ಈ ಊರನ್ನು ಸಿಕ್ಕಿಂ ರಾಜರಿಂದ ಗುತ್ತಿಗೆಪಡೆದಿದ್ದು. ತೀಕ್ಷ ಉಷ್ಟತೆಯಿಂದ ರಕ್ಷಿಸಿಕೊಳ್ಳಲು ಬ್ರಿಟಿಷರಿಗೆ ಇದೊಂದು ಅತ್ಯಂತ ಪ್ರಿಯವಾದ ಸ್ಟಳವಾಗಿತ್ತು. ಗಿರಿಧಾಮದ ನಿರ್ಮಾಣ, ಪ್ರಾಯೋಗಿಕ ಚಹಾ ತೋಟದ ಹುಟ್ಟು, ಅಲ್ಲಿ ಬಂದು ತಂಗುವ ಬ್ರಿಟಿಷ್ ಜನರಿಗಾಗಿ ಶಿಕ್ಷಣ ಮತ್ತು ಅನೇಕ ಬಗೆಯ ಕ್ಷೇಮಾಭಿವೃದ್ಧಿ ಕೇಂದ್ರಗಳ ನಿರ್ಮಾಣ ಹೀಗೆ ಹಂತಹಂತವಾಗಿ ಮೂಡಿತು ದಾರ್ಜೀಲಿಂಗ್ ಪಟ್ಟಣ. ಅಂದಿನ ದಾರ್ಜೀಲಿಂಗ್ ಹಿಮಾಲಯನ್ ರೈಲ್ವೆ ವ್ಯವಸ್ಥೆಯಿಂದಲೇ, ಈ ಪಟ್ಟಣ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳಲು ಸಹಕಾರವಾದದ್ದು ಎಂದು ಕೂಡಾ ಕೇಳಿ ತಿಳಿದೆವು. 'ಬೆಟ್ಟಗಳ ರಾಣಿ' ಎಂದೇ ಪ್ರಸಿದ್ಧವಾದ ದಾರ್ಜೀಲಿಂಗ್ ನ ಮುಖ್ಯ ಆದಾಯವೇ ಪ್ರವಾಸೋದ್ಯಮ ಮತ್ತು ಚಹಾ ಬೆಳೆ. ಬೆಳ್ಳನೆ ಹಿಮಾಲಯದ ಹೊಳಪು, ಮೇಲೇರಿದಂತೆ ಮೋಡಗಳ ಜೊತೆಜೊತೆಯೇ ನಾವು ಸಂಚಾರ ಮಾಡುತ್ತಿದ್ದೇವೇನೋಎಂದೆನಿಸುವ ಹಾದಿಗಳು, ಈಗಿನ್ನೂ ಮಳೆಗಾಲ ನಡೆಯುತ್ತಿದ್ದುದರಿಂದ, ಒಂದು ಕ್ಷಣಕ್ಕೆ ಇಬ್ಬನಿಯಿಂದ ೫ ಅಡಿಯಿಂದ ಮುಂದೇನೂ ಕಾಣದಷ್ಟು ಮುಸುಕು, ಮತ್ತೊಂದು ಕ್ಷಣಕ್ಕೆ ಸ್ವಚ್ಛ ತೊಳೆದಿಟ್ಟ ನಿಸರ್ಗ ಸೌಂದರ್ಯದ ಅನಾವರಣ.. ದಾರ್ಜೀಲಿಂಗ್ ಪಟ್ಟಣದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟೂ ದೂರಕ್ಕೆ, ಪದಗಳಲ್ಲಿ ಬಣ್ಣಿಸಿದಷ್ಟೂ ಕಮ್ಮಿ ಎನ್ನುವಂತಹ ಪ್ರಾಕೃತಿಕ ಸೌಂದರ್ಯ! ಚುಮುಚುಮು ಚಳಿಯ ಸೀಸನ್ ನಡೆಯುತ್ತಿದ್ದ ಈ ಊರಿನಲ್ಲಿ ಬೆಳಗಾಯಿತು ಎನ್ನುವುದು ೪.೩೦ ಸುಮಾರಿನಿಂದಲೇ ಮತ್ತು ಸಂಜೆ ೫.೩೦ ಅಷ್ಟರಲ್ಲಿ ಕತ್ತಲಾಗಿ ಸುಮಾರು ೭.೩೦-೮ ಆಗುವಷ್ಟರಲ್ಲಿ ಇಡೀ ಪಟ್ಟಣ ಮಲಗಿಯಾಗಿರುತ್ತದೆ! ಪ್ರವಾಸೋದ್ಯಮ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಲ್ಲಿಂದ ೭೦% ಜನರಿಗೆ ಮುಖ್ಯ ಆದಾಯವನ್ನು ಒದಗಿಸಿಕೊಡುತ್ತಿದೆ. ಉಳಿದಂತೆ ಚಹಾ ಉದ್ಯಮಕ್ಕೆ ಹೆಚ್ಚಿನ ಹೆಂಗಸರು ದುಡಿಮೆಗೆ ಹೋಗುತ್ತಾರೆ. ಆದರೂ ಹೆಚ್ಚಿದ ಪ್ರವಾಸೋದ್ಯಮ, ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಸಮಪಾತವಾಗಿ ಸಂಪೂನ್ಮೂಲಗಳ ನಿರ್ವಹಣೆ ಇಲ್ಲ, ನಗರದ ನಿರ್ಮಾಣ ಅತ್ಯಂತ ಕಿಷ್ಕಿಂದೆಯೆನಿಸುತ್ತದೆ. ಬೆಟ್ಟದ ಮೇಲಿನ ಊರುಗಳು ಹಾಗಾಗಿ ರಸ್ತೆಗಳು ಯಾವುದು ಸಪಾತವಾಗಿರದೆ, ಏರು ಅಥವಾ ಇಳಕಲಿನ ರಸ್ತೆಯೇ ಅಲ್ಲಿ ಸಾಮಾನ್ಯ ಹಾದಿ. ಒಂದೇ ವಾಹನ ಹೋಗುವಷ್ಟು ಕಿರಿದಾದ ರಸ್ತೆ, ಅದರಲ್ಲಿ ಚಾಲಕರ ಚಾಕಚಕ್ಷತೆಯಿಂದ ಎರಡೆರಡು ವಾಹನಗಳು ದಾಟಬೇಕಾದ ಅನಿವಾರ್ಯತೆ. ಇಕ್ಕೆಲಗಳಲ್ಲಿ ಪ್ರಪಾತ ಒಮ್ಮೊಮ್ಮೆ ಎದೆ ಝಲ್ಲೆನ್ನುವ ಅನುಭವ. ಇಲ್ಲಿನ ನಿಸರ್ಗ ಸೌಂದರ್ಯ ನೋಡಿ ಸಂತೋಷಪಡುವಷ್ಟೇ, ನಗರ ಸ್ವಚ್ಛತೆಯ ಕುರಿತಾಗಿ ನಿರ್ಲ್ಯಕ್ಷತೆ ನೋಡಲು ಬೇಸರವಾಗುತ್ತದೆ. ಮೈ ನವಿರೇಳಿಸುವ ಪ್ರಾಕೃತಿಕ ಸೌಂದರ್ಯವನ್ನು ನೋಡುವುದು ಒಂದು ಕಡೆಯಾದರೆ, ಭೂಕುಸಿತದಂತಹ ಅನಿರೀಕ್ಷಿತ ಪ್ರಾಕೃತಿಕ ವಿಕೋಪದ ಸಮಸ್ಯೆಗಳ ನಡುವೆ ಜನರ ನಿತ್ಯ ಜೀವನ ಮೈಜುಮ್ಮೆನ್ನಿಸುತ್ತದೆ.
ದಾರ್ಜೀಲಿಂಗ್ ನ ಮತ್ತೊಂದು ವಿಶೇಷ ಇಲ್ಲಿನ ಟ್ರೈನ್. ಇದನ್ನು "ಟಾಯ್ ಟ್ರೈನ್" ಎಂದೂ ಕರೆಯುತ್ತಾರೆ. ಸಿಲಿಗುರಿಯಿಂದ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯಲ್ಲಿ80 ಕಿ.ಮೀ ಪಯಣ. ಮಧ್ಯೆ ಮುಖ್ಯವಾದ ಒಂದೆರಡು ಊರುಗಳಲ್ಲಿ ಮಾತ್ರನಿಲ್ದಾಣ. ಎತ್ತರದ ಬೆಟ್ಟವನ್ನು ವಾಹನಗಳು ಓಡಾಡುವ ರಸ್ತೆಯ ಪಕ್ಕದಲ್ಲೇ, ರಸ್ತೆಗೆ ಹೊಂದಿಕೊಂಡಂತೆ ರೈಲಿನ ಹಳಿಗಳ ಮೇಲೆ ಹತ್ತಿಳಿಯುವ ಟಾಯ್ ಟ್ರೈನ್ ಬರುತ್ತಿದ್ದರೆ, ಜನರು ಆ ಸಮಯಕ್ಕೆ ರೈಲಿನ ಹಳಿಗಳಿಂದ ಸರಿದುಕೊಂಡು, ಟ್ರೈನ್ ಹೋಗಿಯಾದ ನಂತರ ಮತ್ತೆ ಆ ಜಾಗವನ್ನು ಮಾಮೂಲು ರಸ್ತೆಯಂತೆ ಬಳಸುವ ಬಗೆ ನೋಡಲೇ ಒಂದು ರೀತಿಯ ಮಜಾ. UNESCOದಿಂದ ವಿಶ್ವ ಪರಂಪರೆ ತಾಣ ಎಂದು ಘೋಷಿಸಲ್ಪಟ್ಟಿದ್ದು, ಈ ಗೌರವ ಪಡೆದ ವಿಶ್ವದ ಎರಡನೇ ರೈಲ್ವೆ ಇಲ್ಲಿಯದಾಗಿದೆ.
.
ನೇಪಾಳಿ ಭಾಷೆ ಹೆಚ್ಚಿನ ಜನರ ಭಾಷೆಯಾಗಿದ್ದರೂ ಇಲ್ಲಿ ನೇಪಾಳ, ಸಿಕ್ಕಿಂ, ಬಂಗಾಳ ಮತ್ತು ಭೂತಾನ್ ನ ಜನಾಂಗ ಮೂಲದ ಜನರಿದ್ದಾರೆ. ನಾವು ಹೋಗಿದ್ದು ನವರಾತ್ರಿಯ ಸಮಯದಲ್ಲಿ ಆದ್ದರಿಂದ, ಬೆಂಗಾಳಿಯರ ದಸರಾ ಹಬ್ಬದ ವಾತಾವರಣ ಎಲ್ಲೆಡೆ ಕಾಣಸಿಗುತ್ತಿತ್ತು. ಬೌದ್ಧರ ಧರ್ಮಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ, ದಸರಾ ಆಚರಣೆಯ ಅಂಗವಾಗಿ ನಡೆಯುತ್ತಿದ್ದ ಒಂದು ಲಕ್ಷ ತಾರಾ ದೇವಿ ಮಂತ್ರ ಪಠಣ ಕಾಣುವ ಅವಕಾಶವಾಯಿತು.
ಆಯ್ದ ಚಿತ್ರಗಳು ನಮ್ಮ ಸಧ್ಯದ ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಟ್ರಿಪ್ ನಿಂದ. ಮಳೆಗಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಇಂತಿಷ್ಟೇ ಸಮಯ ಎಂದು ಇಲ್ಲಿ ಹೇಳಲಾಗದು. ಹಸಿ ಅಂಶ ಹೆಚ್ಚಾದ ಹಾಗೆಯೂ ಗುಡ್ಡ ಬೆಟ್ಟ ಬಂಡೆಗಳು ಕುಸಿಯುವುದು ಇಲ್ಲಿ ಸರ್ವೇ ಸಾಮಾನ್ಯ ಸಂಗತಿ. ಪ್ರವಾಸದುದ್ದಕ್ಕೂ ಪಡೆದ ಒಂದಷ್ಟು ಮಾಹಿತಿಗಳನ್ನು, ನೋಡಿದ ಸ್ಥಳಗಳ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
೧. ಹಾದಿಯಲ್ಲಿ ಕಂಡ ನವರಾತ್ರಿ ಉತ್ಸವ.
೫. Famous iconic place - center of the city - Darjeeling Clock tower. Its also called as Chowrasta means where four roads joins.
Super..You can imagine how adventurous Brits really were when you look at Darjeeliing railway..
ಪ್ರತ್ಯುತ್ತರಅಳಿಸಿ