ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಗೋಚರ ಸ್ನೇಹಿತರು..

 ಘಟನೆ ೧.          "ಅಮ್ಮಾ, ಡಿಂಗ್ರೀಗೂ ಜೋಕಾಲಿ ಆಡಬೇಕಂತೆ, ನೀನೇ ತೂಗ್ಬೇಕಂತೆ ಅಮ್ಮ....." ಎಂದು ನಳಿನಿಯ  ಮಗಳು ಪಾರ್ಕಲ್ಲಿ ಕೂಗುತ್ತಿದ್ದರೆ, ನಳಿನಿಯ ಫ್ರೆಂಡ್ ರಜತ ಸುತ್ತಮುತ್ತಲು ಆಶ್ಚರ್ಯದಿಂದ ಒಮ್ಮೆ ಕಣ್ಣು ಹಾಯಿಸಿದಳು. ಅಲ್ಲಿ ಇನ್ಯಾವದು ಮಗು ಆಟವಾಡ್ತಿರೋದು ಕಾಣಲಿಲ್ಲ. ಅದಕ್ಕೆ ಪೂರಕವೆಂಬಂತೆ ನಳಿನಿ, ತನ್ನ ಮಗಳು ಆಟವಾಡುತ್ತಿದ್ದ ಜೋಕಾಲಿಯ ಪಕ್ಕದ ಜೋಕಾಲಿಯನ್ನು ಸುಮ್ಮನೆ ಹೋಗಿ ಒಮ್ಮೆ ತೂಗಿ ಬಂದಳು. ರಜತಳ ಸಂಶಯ ಮುಖಭಾವವನ್ನು ಗಮನಿಸಿದ ನಳಿನಿ ಸುಮ್ಮನೆ ಒಮ್ಮೆ ನಕ್ಕು ಹೇಳಿದಳು, "ಡಿಂಗ್ರೀ, ನನ್ನ ಮಗಳ ಕಾಲ್ಪನಿಕ ಸ್ನೇಹಿತೆ". ರಜತ ಇದನ್ನು ಕೇಳಿ ಏನು ಹೇಳಬೇಕಂದು ತಿಳಿಯದೆ ತಟಸ್ಥವಾದಳು. ಘಟನೆ ೨.          "ಪಪ್ಪಾ, ನೀನು ಇನ್ಮೇಲಿಂದ  ಒಂದೇ  ಚಾಕೊಲೆಟ್  ತರಬೇಡ, ಎರಡು ತಗೊಂಡ್ ಬಾ, ಇಲ್ಲಾಂದ್ರೆ ಡೋರಿ ಗೆ ಬೇಜಾರಾಗತ್ತೆ", "ಮಮ್ಮೀ, ನಾ ಸ್ಕೂಲ್ ಗೆ ಹೋದಾಗ, ಡೋರಿ ಮಿಲ್ಕ್ ಚೆಲ್ಲಿದರೆ ಬೈಬೇಡ ಮತ್ತೆ ನಾನು ಬರೋವರೆಗೆ ನನ್ ರೂಮ್ ಗೆ ಯಾರೂ ಹೋಗ್ಬೇಡಿ ಡೋರಿ ನಂಗೋಸ್ಕರ ಕಾಯ್ತಿರ್ತೀನಿ ಹೇಳಿದಾಳೆ", ಹೀಗೆ ಪ್ರಮೋದ್ ಅವನ ಅಮ್ಮ ಅಪ್ಪನಿಗೆ ದಿನವೂ ಹೇಳುತ್ತಿದ್ದರೆ , ಇತ್ತ ಪ್ರಮೋದ್ ತಾಯಿ ಇಂದಿರಾಗೆ ಮನಸ್ಸಿನೊಳಗೊಳಗೇ ಆತಂಕ, ಭಯ. ರೂಮಿನಲ್ಲಿ ಮಗ ಗಾಳಿಯಲ್ಲಿ ಯಾರದ್ದೋ ಜೊತೆ ದಿನವಿಡೀ ಸಂಭಾ...

ಬಾಯಲ್ಲಿ ಬ್ರಮ್ಹಾಂಡ

ಇಮೇಜ್
               ಸಾನ್ವಿಯ ಆಗಮನದಿಂದ ನಮ್ಮ ಕುಟುಂಬದಲ್ಲಿ ಸಹಜವಾಗಿಯೇ ಅತೀವ ಸಂತೋಷ ಆವರಿಸಿತ್ತು.. ೫ ತಿಂಗಳಷ್ಟರಲ್ಲಿ ಅವಳು ಕೈ ಬಾಯಿಯ ಸಂಪರ್ಕದ ನಿಯಂತ್ರಣ ಪಡೆಯುವಲ್ಲಿ ಸಫಲಳಾಗಿ, ಕೈಗೆ ಸಿಗುವ ಪ್ರತಿಯೊಂದು ವಸ್ತುವನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಪ್ರಾರಂಭಸಿದ್ದಳು. ಯಾವ ಸಮಯದಲ್ಲಿ ಏನನ್ನು ಬಾಯಿಗೆ ಹಾಕಿಕೊಳ್ಳುತ್ತಾಳೆ ಎಂದು ಜಾಗರೂಕರಾಗಿ ನಾವು ಅವಳನ್ನು ಕಾಯ್ದುಕೊಳ್ಳಬೇಕಾಗುತ್ತಿತ್ತು. ತನ್ನಿಷ್ಟದ ಮೇಲು ಹೊದಿಕೆ, ತನ್ನ ಕೈ, ಕಾಲು, ಬಾಗಿಲ ಹೊಸ್ತಿಲು, ಆಟಿಕೆಗಳು, ಚಾಪೆ, ಮೊಬೈಲ್, ಬಾಚಣಿಗೆ, ಊಟದ ತಟ್ಟೆ, ಕೊನೆಗೆ ದೇವರ ಕೋಣೆಯಲ್ಲಿರುವ ಹೂವನ್ನು ಕೂಡ ಬಿಡುತ್ತಿರಲಿಲ್ಲ. ಎಲ್ಲವೂ ಬಾಯಿಯ ಸಂಪರ್ಕಕ್ಕೆ ಹೋಗುತ್ತಿತ್ತು. ಇದರ ಜೊತೆಗೆ, ಸದಾ ಬಾಯಿಯಿಂದ ಸುರಿಯುವ ಜೊಲ್ಲು. ಕೆಲವರೆಂದರು ಮಗುವಿಗೆ ದೃಷ್ಟಿಯಾಗಿರಬಹುದು ಎಂದು, ಇನ್ಯಾರೋ ಮಗುವಿಗೆ ತುಟಿಗೆ ಮುತ್ತು ಕೊಟ್ಟಿದ್ದರೆ ಈ ತರಹದ ಕ್ರಿಯೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು,  ಹಲ್ಲು ಬರುವಾಗ ಈ ತರಹದ ಸಮಸ್ಯೆಯಾಗುತ್ತದೆ ಎಂದು ಕೆಲವರು ತಿಳಿಸಿದರು. ಜೊಲ್ಲು ಬರುವುದು ಕಮ್ಮಿಯಾಗಲು ತುಟಿಗೆ ತುಪ್ಪ ಅಥವಾ ಬೆಣ್ಣೆ ಸವರಿ ಬಿಡಿ ಎಂದು ಮತ್ತೊಬ್ಬ ಆಪ್ತರು ಸಲಹೆ ಕೊಟ್ಟರು, ಹೀಗೆ ಹಲವು ಓಹಪೊಹೆಗಳ ನಡುವೆಯೂ ಮಗಳು...

ಮಣ್ಣು ಮರಳು ಮತ್ತು ಮಕ್ಕಳು

ಇಮೇಜ್
              ಸಂಜೆಯ ಸಮಯ ಸಾಮಾನ್ಯವಾಗಿ ನನ್ನ ಮಗಳನ್ನು ವಾಕಿಂಗ್ ಕರೆದುಕೊಂಡು ಹೋಗುವ ರೂಢಿ. ಅದು ಅವಳ ಅತ್ಯಂತ ಸಂತೋಷದ ಸಮಯ. ಹೊರಗೆ ಕಾಲಿಡುತ್ತಿದ್ದಂತೆಯೇ, ಅವಳ ಮೊದಲ ಗಮನ ರಸ್ತೆಯ ಬದಿಗಿನ ಮಣ್ಣು, ಮರಳು, ಕಲ್ಲಿನ ಮೇಲೆಯೇ ಇರುತ್ತದೆ. ಮಣ್ಣು ಕೆದಕುವುದು, ಕಲ್ಲು ಆರಿಸುವುದು, ಮರಳಿನಲ್ಲಿ ಗುಂಡಿ ತೊಡುವುದು ಇವೆಲ್ಲಾ ಆಟಗಳು ಶುರುವಾಗಿ ಹೋಗುತ್ತದೆ. "ಅಯ್ಯೋ ಸೌಮ್ಯಾ, ಮಗಳನ್ನಾ ಎತ್ಕೊಳ್ರಿ, ಮಣ್ಣಾಡ್ತಿದಾಳೆ... ಏನೇ ಹುಡ್ಗೀ, ಅಷ್ಟೂ ಬಟ್ಟೆನೆಲ್ಲಾ  ಗಲೀಜು ಮಾಡ್ಕೊಂಡಿದೀಯ...ಏಯ್ ಯಾರದು ಮಣ್ಣಲ್ಲಿ ಆಡೋರೂ...?? ಬಾಯಿಗೆ ಹಾಕ್ತಾರೆ ನೋಡ್ಕೊಳ್ರಿ...ಥೂ ಕರ್ಕೊಂಡ್ ಬರ್ರೀ  ಈ ಕಡೆ, ಮೈ ಕೈ ಎಲ್ಲಾ ಕೆಸರು ಮಾಡ್ಕೊಂಡಿದಾಳೆ. ತಂಡಿ  ಜ್ವರ ಆಗೋದು ಇದಕ್ಕೇನೆ..." ಇವೇ  ಎಲ್ಲಾ ಸಾಮಾನ್ಯವಾಗಿ ನನಗೆ ಕೇಳಿ ಬರುವ ಮಾತುಗಳು... ೧. ಮಣ್ಣಿನಲ್ಲಿ ಆಡುವುದರ ಬಗೆಗಿನ ತಪ್ಪು ಕಲ್ಪನೆ :              ಮಣ್ಣು, ಮರಳು, ಕಲ್ಲು, ಇವೆಲ್ಲ ಪ್ರಕೃತಿ ಸಹಜದತ್ತವಾಗಿಯೇ ಮಕ್ಕಳಿಗೆ ಕೊಟ್ಟ ಉಡುಗೊರೆ...ಆದರೆ ಇವತ್ತಿನ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಕೊಡಬೇಕು, ಆರೋಗ್ಯಕರವಾದ ಜೀವನವನ್ನು ಕೊಡಬೇಕೆಂಬ ಹಂಬಲದಿಂದ, ತಮ್ಮ ಮಕ್ಕಳು...