ಲಂಕಾವಿ - ಸ್ಕೈಕ್ಯಾಬ್ ಮತ್ತು ಸ್ಕೈಬ್ರಿಜ್

ಮಲೇಷಿಯಾದಲ್ಲಿ ಎರಡನೇ ದಿನಕ್ಕೆ ನಮ್ಮ ತಿರುಗಾಟ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ನಲ್ಲಿರುವ ಸ್ಕೈಕ್ಯಾಬ್ ಮತ್ತು ಸ್ಕಾಯ್ಬ್ರಿಡ್ಜ್ ನ ಕಡೆಗಿತ್ತು. ಲಂಕಾವಿಯಿಂದ ಟಾಕ್ಸಿ ಅಥವಾ ಸ್ವಂತ ಗಾಡಿಯಲ್ಲಿ ಹೋಗಬಹುದಾದ ೩೫ ನಿಮಿಷಗಳ ಹಾದಿ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್ ಹತ್ತಿರವಾಗುತ್ತಿದ್ದಂತೆಯೂ, ತನ್ನ ಹಸುರಿನ ಹಾದಿಯೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಲಂಕಾವಿಯ ವಾಯುವ್ಯದಲ್ಲಿರುವ ಮಚಿನ್‌ಚಾಂಗ್ ಸುಮಾರು ೧೦,೦೦೦ ಹೆಕ್ಟೇರ್ ವಿಸ್ತೀರ್ಣಕ್ಕೆ ಹಬ್ಬಿರುವ ಖಾಯಂ ಅರಣ್ಯ ಮೀಸಲು ಪ್ರದೇಶವನ್ನು ಒಳಗೊಂಡಿದೆ. ಯುನೆಸ್ಕೋ ಸಂರಕ್ಷಿತ ಈ ಪಾರ್ಕ್ ಪ್ರದೇಶಗಳಲ್ಲಿ ಒಂದಾದ ಮಚಿನ್‌ಚಾಂಗ್‌ನ ಪರ್ವತ ಶ್ರೇಣಿ ಸಾವಿರಾರು ವರ್ಷಗಳಿಂದ ಮೂಡಿರುವ ಸುಣ್ಣದ ಕಲ್ಲಿನ ರಚನೆಗಳು, ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಸಂಚಿತ ಶಿಲಾ ಪದರಗಳ ರಚನೆಗಳಿಂದ ರೂಪುಗೊಂಡಿವೆ. ೫೦೦-೫೫೦ ಮಿಲಿಯನ್ ವರ್ಷಗಳಷ್ಟೇ ಹಳೆಯವವು ಎಂದು ಊಹಿಸಲಾಗಿದೆ. ಎತ್ತರೆತ್ತರ ಬೆಟ್ಟ ಗುಡ್ಡಗಳು, ಸಾವಿರಾರು ಬಗೆಯ ಸಸ್ಯಕಾಶಿ, ಜಲಪಾತ, ನೂರಾರು ಬಗೆಯ ಮೃಗ ಪಕ್ಷಿಗಳಗಳ ವೈವಿಧ್ಯತೆಯಿಂದ ಕೂಡಿದ್ದು, ತನ್ನ ಭೂವೈಜ್ಞಾನಿಕ ಅದ್ಭುತಗಳು ಮತ್ತು ಅಗಾಧ ಪರಿಸರ ಸಂಪತ್ತಿಗೆ ಹೆಸರಾಗಿದೆ. ಪ್ರವಾಸೋದ್ಯಮದ ಆಕರ್ಷಣೆಯಾಗಿ, ಮಾರ್ಗದರ್ಶಿತ ಚಾರಣ, ಜಲಪಾತದ ವೀಕ್ಷಣೆ, ಓರಿಯಂಟಲ್ ವಿಲ್ಲೇಜ್ ಎಂಬ ಸ್ಥಳದಲ್ಲಿ ಸ್ಕೈ ಕ್ಯಾಬ್ ಮೂಲಕ, ಎತ್ತ...