ಮನೆಯೇ ಮೊದಲ ಆಟ ಶಾಲೆ

'ಆಟ' ಎನ್ನುವುದೇ ಒಂದು ಸಂತಸದ ಶಬ್ಧ. ಯಾವ ವಯಸ್ಸಿನ ಮಕ್ಕಳಿಗೆ ಆಗಲಿ ಆಟವಾಡುವುದೆಂದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ. ಆಟ ಯಾವುದೇ ಮಗುವಿನ ಪ್ರಮುಖ ಬೆಳವಣಿಗೆಯ ಪ್ರತೀಕ. ಚಿಕ್ಕ ಶಿಶುವಿನಿಂದ ಹಿಡಿದು ವಯಸ್ಸಾಗಿರುವ ಹಂತದ ವರೆಗೂ ಆಟಗಳು ನಮಗೆ ಮುದವನ್ನು ಕೊಡುತ್ತದೆ. ಮಕ್ಕಳಿಗೆ ಕೆಲವು ಆಟಗಳಿಗೆ ನಮ್ಮ ಸಹಾಯದ ಅವಶ್ಯಕತೆ ಇರುತ್ತದೆ. ಮತ್ತೆ ಕೆಲವು ಆಟಗಳು ಅವರು ತಾವೇ ಆಡಲು ಇಚ್ಚಿಸುತ್ತಾರೆ. ಆದಷ್ಟು ಕುತೂಹಲ ಉಂಟು ಮಾಡುವ ಆಟಗಳು ಮಕ್ಕಳ ಬುದ್ಧಿ ವಿಕಸನವಾಗಲು ಸಹಾಯ ಮಾಡುತ್ತದೆ. ಆಟಗಳ ಬಗ್ಗೆ ಬರಿಯಲಿಚ್ಚಿಸಿದರೆ ಸಾಕಷ್ಟಿದೆ. ಸದ್ಯಕ್ಕೆ ನಾನು ಕೆಲವು ಮನೆಯಲ್ಲಿಯೇ ನಾವು ಆಡಿಸಬಹುದಾದ ಕ್ರಿಯಾತ್ಮಕ ಆಟಗಳ ಒಂದು ಚಿಕ್ಕ ಟಿಪ್ಪಣಿ ಕೊಡಲಿಚ್ಚಿಸುತ್ತೇನೆ. ಈ ಕೆಲವು ಆಟಗಳು ಸುಮಾರು ೧.೫ ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ೪ ವರ್ಷದ ವರೆಗಿನ ಮಕ್ಕಳಿಗೆ ಆಡಿಸುವಂತದ್ದು. ೧. ಪಾತ್ರೆ, ಲೋಟ, ಕರಡಿಗೆ ಮತ್ತು ಚಮಚಗಳು ಹೌದು. ಮಕ್ಕಳಿಗೆ ಎಷ್ಟೇ ಆಟದ ಸಾಮಾನು ಇದ್ದರೂ, ಕಡೆಗೆ ಅವರು ಅಡುಗೆ ಮನೆಯ ಕಡೆಗೇ ಹೊರಳುತ್ತಾರೆ. ಕಾರಣ ಇಷ್ಟೇ. ತನ್ನ ಪ್ರೀತಿಪಾತ್ರರು ಸಾಕಷ್ಟು ಸಮಯ ಕಳೆಯುವ ಜಾಗ ಅದು. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳು ಅವರಿಗೆ ಕುತೂಹಲಕಾರಿಯಾಗಿದ್ದಿರುತ್ತದೆ. ಮಕ್ಕಳು ಒಮ್ಮೆಯಾದರೂ ಪಾತ್ರೆ ಸೌಟು ಹಿಡಿದು ಆಟವಾಡಿಯೇ ಆಡುತ್ತಾರೆ. ಅದರಿಂ...