ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತುಪ್ಪರಹಿತ ಡ್ರೈಫ್ರೂಟ್ ಲಡ್ಡು!

ಇಮೇಜ್
 ಸಸ್ಯಜನ್ಯ ಡ್ರೈಫ್ರೂಟ್ಸ್ ಲಡ್ಡು! ತುಪ್ಪ-ಒಪ್ಪು-ತಪ್ಪುಗಳ ಸಮಯಕ್ಕೇನೇ ಈ ಪೋಸ್ಟಾ ಅಂತ ಕೇಳಬೇಡಿ. ನಾನು ಮನೇಲಿ ಮಾಡಿಕೊಂಡೆ. ಪರಿಚಯದವರು ರೆಸಿಪಿ ಕೇಳಿ ಸಾಕಷ್ಟು ದಿನ ಆಗಿತ್ತು. ಮಾಡಿದ ಮೇಲೆ ತಕ್ಷಣ ನೆನಪಾಗಿ ಬರೆಯುತ್ತಿದ್ದೇನೆ. ಅವರ ಜೊತೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ.  ರುಚಿಕರ, ಆರೋಗ್ಯಕರ, ಸಕ್ಕರೆ ಇಲ್ಲದ ಡ್ರೈ ಫ್ರೂಟ್ಸ್ಉಂಡೆ ಇದು. ನನ್ನ ಟ್ರೆಕಿಂಗ್ಗಳಿಗೆ ಇದೇ ನನ್ನ ಎನರ್ಜಿ ಬಾರ್. ಪ್ರವಾಸ ಹೋದಾಗ, ಹೋದಲ್ಲೆಲ್ಲ ಸಸ್ಯಜನ್ಯ ಆಹಾರ ಹುಡುಕುತ್ತ ಹೋಗುವ ಜಾಯಮಾನವಿಲ್ಲ. ಈ ಉಂಡೆ ನನ್ನ ಬ್ಯಾಗಿನಲ್ಲಿರುತ್ತದೆ. ಕಷ್ಟಕಾಲಕ್ಕೆ ನನ್ನ ಕೈ ಹಿಡಿಯುವ ಅಲ್ಲಲ್ಲ ಬಾಯಿಗೆ ಹಿಡಿಯುವ ಉಂಡೆ :)  ಬೇಕಾಗುವ ಸಾಮಗ್ರಿಗಳ ಪೈಕಿ ನಿಮಗೆ ಒಪ್ಪುವ ಇನ್ನಿತರ ಡ್ರೈ ಫ್ರೂಟ್ಸ್ ಗಳನ್ನೂ ಹಾಕಬಹುದು. ನಾನು ಬಳಸುವ ಒಣಹಣ್ಣುಗಳ ಇಲ್ಲಿ ತಿಳಿಸಿದ್ದೇನೆ ಒಂದು ಅಂದಾಜಿನ ಪ್ರಮಾಣದೊಂದಿಗೆ. ಪ್ರಯೋಗ ಮಾಡುತ್ತಾ ಮಾಡುತ್ತಾ ನಿಮಗೇ ಬೇಕಾದ ರುಚಿ ಮತ್ತು ಹದ ತಿಳಿಯುತ್ತಾ ಹೋಗುತ್ತದೆ. ತುಪ್ಪ, ಹಾಲು ಇಲ್ಲದ, ಒಣ ಹಣ್ಣುಗಳು, ಒಣದ್ರಾಕ್ಷಿ, ಬೀಜಗಳು ಮತ್ತು ಒಣ ತೆಂಗಿನಕಾಯಿ ತುರಿಯ ಸುಲಭ ಸಂಯೋಜನೆಯು ರೆಸಿಪಿಯಿದು. ಮಾಡಲು ಬೇಕಾಗುವ ಸಮಯ :  ೩೦ ರಿಂದ ೪೦ ನಿಮಿಷಗಳು  ಬೇಕಾಗುವ ಸಾಮಗ್ರಿಗಳು :  ೧ ಕಪ್ ಬಾದಾಮಿ ೧/೨ ಕಪ್ ಶೇಂಗಾಬೀಜ ೧/೨ ಕಪ್ ಗೋಡಂಬಿ (ನಾನು ನನ್ನ ಕಫ ಪ್ರಕೃತಿಗೆ ಅರ್ಧಕ್ಕಿಂತಲೂ ತುಸು...

ಬಿಜಲಿ ಮಹಾದೇವ್!!

ಇಮೇಜ್
ಚಂದ್ರಖಾನಿ ಪಾಸ್ ನ ಒಟ್ಟು ೬೫ ಕಿಮೀ ಚಾರಣದ ಭಾಗವಾಗಿ, ಮೂರನೇ ದಿನದ ನಮ್ಮ ಚಾರಣ, ಮೊದಲ ನಾಲ್ಕು ಕಿಲೋಮೀಟರ್ - ಬಿಜಲಿ ಮಹಾದೇವ್ ಎಂಬ ಧಾರ್ಮಿಕ ಪ್ರೇಕ್ಷಣೀಯ ಪುಣ್ಯ ಸ್ಥಳಕ್ಕೆ ಮೂಲಕ ಹಾದು, ನಂತರಕ್ಕೆ ಏಳು ಕಿಲೋಮೀಟರ್ ಸೋಲಾಟಂಕಿ ಎಂಬ ಬೇಸ್ ಕ್ಯಾಮ್ಪ್ ತಲುಪುವ ಯೋಜನೆಯೊಂದಿಗೆ ಕೂಡಿತ್ತು.  ೬೫೦೦ ಫೀಟ್ ಎತ್ತರದಲ್ಲಿರುವ ಚಾನ್ಸರಿ ಎಂಬ ಹಳ್ಳಿಯಿಂದ ನಮ್ಮ ಆ ದಿನದ ಚಾರಣವನ್ನು ಪ್ರಾರಂಭಿಸಿದೆವು. ಅಲ್ಲಿಯವರೆಗೆ ಹಿಂದಿನ ಬೆಸ್ಕ್ಯಾಮ್ಪ್ ನಿಂದ ಮಿನಿ ಬಸ್ಸಿನಲ್ಲಿ ೩೦ ಕಿಮೀ ಗಳ ಪ್ರಯಾಣ ಬೆಳೆಸಿದ್ದೆವು. ಏಕಕಾಲಕ್ಕೆ ಒಂದೇ ವಾಹನ ಹೋಗಲು ಸಾಧ್ಯವಿರುವ ಕೊರಕಲು ರಸ್ತೆ, ಮೇಲೇರಿದ ಹಾಗೆಯೂ ಜೀವ ಝಲ್ಲೆನಿಸುತ್ತದೆ. ರಸ್ತೆಯ ತುತ್ತತುದಿಯಲ್ಲಿ ಬಸ್ಸಿನ ಒಂದು ಚಕ್ರ ಇರುತ್ತದೆ, ಕೆಳಗಡೆ ಪ್ರಪಾತ. ಅಷ್ಟಾದರೂ ಎದುರುಬದರು ವಾಹನವನ್ನು ದಾಟಿಸಿಕೊಳ್ಳುವ ಅಲ್ಲಿನ ವಾಹನ ಚಾಲಕರಿಗೆ ಒಂದು ಸಲಾಂ.   ಕಲು ಜಿಲ್ಲೆಯ ಸುತ್ತಮುತ್ತಲೂ ಎತ್ತರೆತ್ತರಕಣಿವೆಗಳೇ ಎಲ್ಲವೂ ಅವುಗಳ ಮೇಲಿರುವ ಹಳ್ಳಿಗಳು!  ಮರದಿಂದ ಮಾಡಿದ ಸಣ್ಣ ಸಣ್ಣ ಹಳೆಯ ಮನೆಗಳು, ಅಲ್ಲಲ್ಲಿ ಇತ್ತೀಚಿನ ಸಿಮೆಂಟ್ ಮನೆಗಳು, ಹೆಚ್ಚಾಗಿ ಕಲ್ಲಿನ ಹೆಂಚುಗಳನ್ನು ಮನೆಯ ಮೇಲೆ ಮುಚ್ಚಿಗೆಯ ರೂಪದಲ್ಲಿ ಹಾಕುತ್ತಾರೆ, ಹಿಮಪಾತದಿಂದ ಸುರಕ್ಷಿತವಾಗಿರಲು. ಕೆಲವರದ್ದು ದನ, ಕುರಿ ಪಶು ಸಂಗೋಪನೆ ಎಂಬುದು ಜಾನುವಾರುಗಳ ನೋಡಿ ತಿಳಿಯುತ್ತದೆ. ಕೆಲವರದ್ದು ಮನೆ ಸುತ್ತಲೇ ಎಲ್ಲೆಲ್ಲಿ ಜಾ...