1800 ವರ್ಷಗಳಿಂದ - ಪ್ರತಿದಿನ ಬದಲಾಯಿಸಲಾಗುತ್ತಿರುವ ಧ್ವಜ!
ನಮ್ಮಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ, ಗಣರಾಜ್ಯೋತ್ಸವ ಹೀಗೆ ವಿಶೇಷ ದಿನಗಳಲ್ಲಿ ದೇಶದಾದ್ಯಂತ ಧ್ವಜ ಹಾರಿಸುವ ಪ್ರತೀತಿ ಇದೆ. ಆದರೆ ದಿನನಿತ್ಯ ಧ್ವಜ ಹಾರಿಸುವಂತಿದ್ದರೆ? ಹೀಗೊಂದು ಚಟುವಟಿಕೆ ಬಗ್ಗೆ ನೀವು ಈ ಮುಂಚೆ ಕೇಳಿದ್ದೀರಾ? ನಮ್ಮ ದೇಶದಲ್ಲಿಯೇ ಇರುವ ಅತ್ಯಂತ ಪುರಾತನ ಇತಿಹಾಸವಿರುವ, ತನ್ನ ವಾಸ್ತುಶಿಲ್ಪದಿಂದ ಹೆಸರು ಮಾಡಿರುವ - ಪುರಿ ಜಗನ್ನಾಥ ದೇವಾಲಯದಲ್ಲಿ ನೂರಾರೂ ಅಲ್ಲ, ಬರೋಬ್ಬರಿ ೧೮೦೦ ವರ್ಷಗಳಿಂದ ಈ ಒಂದು ಆಚರಣೆನ ಡೆಸುತ್ತಾ ಬರುತ್ತಿದ್ದಾರೆ! ದೇವಾಲಯದ ೧೦೦ ಅಡಿ ಎತ್ತರದ ಗೋಪುರದ ಮೇಲಿರುವ, ಭಗವಾನ್ ವಿಷ್ಣುವಿನ ಸುದರ್ಶನ ಚಕ್ರವನ್ನು ಪ್ರತಿನಿಧಿಸುವ ನೀಲ ಚಕ್ರ ಅಥವಾ ಶ್ರೀ ಚಕ್ರದ ಮೇಲಿನ ಧ್ವಜವನ್ನುಒಂದೂ ದಿನವೂ ಬಿಡದೆ, ದಿನಂಪ್ರತಿ ಬದಲಾವಣೆ ಮಾಡಿ ಹೊಸ ಧ್ವಜವನ್ನು ಹಾರಿಸುವ ಪ್ರಾಚೀನ ಸಂಪ್ರದಾಯವನ್ನು ಇಲ್ಲಿಯ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ನಡೆಯುವ ಪ್ರತಿನಿತ್ಯದ ಧ್ವಜಾರೋಹಣಕ್ಕೆ ನಿಗದಿತ ಸಮಯವಿದೆ. ಪ್ರಪಂಚದಲ್ಲಿ ಏನೇ ನಡೆಯುತ್ತಿರಲಿ, ಪುರಿ ಜಗನ್ನಾಥ ದೇವಾಲಯದಲ್ಲಿ ಮಾತ್ರ ಸಂಜೆ ೫ ಗಂಟೆಗೆ ಪ್ರಾರಂಭವಾಗಿ ಧ್ವಜ ಹಾರಿಸುವ ಸಂಪ್ರದಾಯ ನಡೆಯುತ್ತಿರುತ್ತದೆ. ಬೇಸಿಗೆಗಾಲದಲ್ಲಿ ತುಸು ತಡವಾಗಿ ಅಂದರೆ ಸಂಜೆ ೬ ಕ್ಕೆ ಹಾರಿಸುತ್ತಾರೆ. ಧ್ವಜ ಬದಲಿಸಲು ದೇವಾಲಯದ ವಿಮಾನ ಅಥವಾ ಗೋಪುರದ ಮೇಲೆ ತರೆಬೇತಿ ಪಡೆದ ಅರ್ಚಕರು (ಚುನ ಗರುಡ ಸೇವಕರು ಎಂತಲೂ ಕರೆಯುತ್ತಾರೆ) ಸುಮಾರು ೪೫ ಮಹಡಿಯಷ್ಟು ಮೇಲಕ್ಕೆ