ಪೋಸ್ಟ್‌ಗಳು

ಮಾತಾಡ್ ಮಾತಾಡ್ ಮಲ್ಲಿಗೆ..

ಇಮೇಜ್
ಇವತ್ತಿಗೆ ನನ್ನ ಪಾಪು ನನ್ನನ್ನು 'ಅಮ್ಮಾ' ಎಂದು ಪೂರ್ತಿಯಾಗಿ ಕರೆದು ೩ ವರ್ಷಗಳಾದವು. ಎಷ್ಟೊಂದು ಸಂತೋಷದ ಕ್ಷಣ! ನಿಜ ಹೇಳಬೇಕೆಂದರೆ ಅಂದು ನನ್ನಲ್ಲಿ ಸಂತೋಷ, ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ಉದ್ಭವವಾಗಿತ್ತು. ಈ ಪಾಪುಗೆ ಹೇಗೆ ತಿಳಿಯಿತು ನನ್ನನ್ನು 'ಅಮ್ಮಾ' ಎಂದೇ ಸಂಭೋದಿಸಬೇಕೆಂದು. ಈ ಪ್ರಶ್ನೆ ಅಸಮಂಜಸ ಎನಿಸಬಹುದು ಆದರೂ ನನಗೆ ಸಂಶಯ ಕಾಡಿದ್ದೆಂತೂ ನಿಜ.. ಇನ್ನೊಂದು ಬಗೆಯಲ್ಲಿ ಹೇಳುತ್ತೇನೆ. ಇಂಗ್ಲೀಷ್ ಮಾತೃಭಾಷೆಯಾಗಿರುವಂತಹ ಮನೆಗಳಲ್ಲಿ,ಮಗುವು ತಾಯಿಗೆ 'Mommy', 'Mamma' ಎಂದೇ ಕರೆಯಲು ಪ್ರಾರಂಭಿಸುತ್ತದೆ.. ಮಗುವಿಗೆ ಹೇಗೆ ತಿಳಿಯಿತು ತಾನು English  ಭಾಷೆಯಲ್ಲಿ ಮಾತನಾಡಬೇಕೆಂದು? ವಿಷಯವಿಷ್ಟೇ, ಮಗುವು ಕಲಿಯುವುದು ಕೇವಲ ಅನುಕರಣೆಯಿಂದ, ಸಹಜವಾಗಿ ಮತ್ತು ತಮಗರಿವಿಲ್ಲದೆ... ಯಾವುದೇ ಹುಟ್ಟಿದ ಶಿಶು, ಈ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೆ (ಸುಮಾರು ೬೫೦೦ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ) ಅವಶ್ಯಕತೆ ಇರುವ ೧೫೦ ಕ್ಕೂ  ಹೆಚ್ಚಿನ ಧ್ವನಿಗಳನ್ನು ಗ್ರಹಿಸುವ ಮತ್ತು ತಮ್ಮ ಬಾಯಿಯಿಂದ ಹೊರಡಿಸುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ವಿಷಯವನ್ನು ನಾನು ಓದಿದಾಗ ಇದು ನಮ್ಮ ಕಲ್ಪನೆಗೂ ಮೀರಿದ್ದು ಎಂದೆನಿಸಿತು. ಈಗ ಭಾಷೆ, ಶಬ್ದ, ವಾಕ್ಯ, ವ್ಯಾಕರಣ ಎಲ್ಲವನ್ನೂ ಕಲಿತಿರುವ ನಮ್ಮಿಂದ ಅಷ್ಟೊಂದು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಈಗಾಗಲೇ ಪಳಗಿ ಹ...

ಭೂಮಿ ಹುಣ್ಣಿಮೆ

ಇಮೇಜ್
ಭೂಮಿ ಹುಣ್ಣಿಮೆ ಒಂದು ಅಪರೂಪದಲ್ಲಿ ಅಪರೂಪದ ಹಬ್ಬ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಭೂಮಿ ತಾಯಿಗೆ ಸಲ್ಲಿಸುವ ಪೂಜಾ ಕ್ರಮ. 'ಸೀಗೆ ಹುಣ್ಣಿಮೆ' ಎಂತಲೂ ಕರೆಯಲ್ಪಡುವ ಈ ಹಬ್ಬದಲ್ಲಿ, ಭೂಮಿಯನ್ನು ದೇವತೆ ಎಂದೇ ಭಾವಿಸಿ ಕೃಷಿಕರೆಲ್ಲ ವರ್ಷಪೂರ್ತಿ ತಮಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ತಮ್ಮ ನೆಲಕ್ಕೆ ವರ್ಷಕ್ಕೂಮ್ಮೆ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಾಗಿದೆ. ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ. ಭೂಮಿ ಹುಣ್ಣಿಮೆ ಹಬ್ಬದಂದು, ತೋಟ ಗದ್ದೆಗಳಲ್ಲಿ ಪೂಜೆಗೆ ಸೂಕ್ತವಾದ ಜಾಗವೊಂದನ್ನು  ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಆ ಜಾಗವನ್ನು ಸ್ವಚ್ಛಗೊಳಿಸಿ, ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿ ಹಸನು ಮಾಡಿಕೊಳ್ಳುತ್ತಾರೆ. ಮರುದಿನ ಮುಂಜಾವಿನಲ್ಲೇ ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ. ಮನೆಯ ಮಂದಿಯೆಲ್ಲ ಸೇರಿ ಪೂಜೆಗೆ ಪಾಲ್ಗೊಳ್ಳಲು ಅನುವಾಗುವಂತೆ ಬಾಳೆ ಎಲೆಗಳನ್ನು ತೋಟದಲ್ಲಿ ಹಾಸಿ ಕುಳಿತುಕೊಳ್ಳಲು ಅಣಿಮಾಡಲಾಗುತ್ತದೆ. ಪೂಜೆ, ಮಂಗಳಾರತಿ, ಬಾಗಿನ ಸಮರ್ಪಣೆ ಮತ್ತು ಹಬ್ಬದಡುಗೆಯ ನೈವೇದ್ಯ ಮಾಡಲಾಗುತ್ತದೆ. ಅದರಲ್ಲೂ ಚೀನಿಕಾಯಿ 'ಕಡುಬು', ಸಾಂಬಾರ ...

ಅನ್ನದ ಋಣ

ನನ್ನ ೩ ವರ್ಷದ ಮಗಳು ಊಟ ತಿಂಡಿ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಚೂಸಿ. ಶಾಲೆಗೆ ಏನು ತೆಗೆದುಕೊಂಡು ಹೋಗುತ್ತೇನೆ, ರೂಟ್ಟಿಗೆ ನೆಂಚಿಕೊಳ್ಳುವುದಕ್ಕೆ ಏನು ಬೇಕು ಎಂಬುದರ ಬಗ್ಗೆ ನಾನು ಕೇಳುವ ಮೊದಲೇ ತಾನು ತೀರ್ಮಾನ ತೆಗೆದುಕೊಂಡಾಗಿರುತ್ತದೆ. ಸೂಪರ್ ಮಾರ್ಕೆಟಿಗೆ ಹೋದಾಗ ತನಗೆ ಇಷ್ಟವಾಗುವ ವಸ್ತು ಮತ್ತು ತಿಂಡಿಗಳನ್ನು ನಮಗಿಂತ ಮುಂಚೆಯೇ ಆಯ್ಕೆ ಮಾಡಿಟ್ಟಿರುತ್ತಾಳೆ. "ಅಮ್ಮ, ಇವತ್ತು ಮಿಕ್ಕಿ ಮೌಸ್ ದೋಸೆ ಮಾಡ್ಕೋಡ್ತ್ಯ?","ನಂಗೆ ಸ್ಕ್ವೇರ್ ಶೇಪ್, ಆರೆಂಜ್ ಕಲರ್ ಚಪಾತಿ ಮಾಡಿ ಕೊಡು", "ವೆಜಿಟಬಲ್ ಬೋಂಡಾ ನಂಗಿಷ್ಟ", "ಹಣ್ಣಿನ ಜೊತೆ ಐಸ್ ಕ್ರೀಮ್ ಕೊಡ್ತ್ಯ?", "ಇವತ್ತು ಮೊಸರು ಜೊತೆ ಸಕ್ರೆ ಬೇಡ ಉಪ್ಪು ಹಾಕಿಕೊಡು" ಹೀಗೆ ಸಾಗಿರುತ್ತದೆ ನನ್ನ ಮಗಳ  ಬಾಯಿ ರುಚಿಗೆ ತಕ್ಕಂತೆ ಇಡುವ ಬೇಡಿಕೆಗಳು. ಬಹುಶಃ ನನ್ನ ಹಾಗೆ ಅನೇಕ ತಾಯಂದಿರಿಗೆ ಇದರ ಅನುಭವವಿದ್ದಿರುತ್ತದೆ. ಒಂದು ದಿನ ಆಹಾರ ಪದಾರ್ಥದ ಸ್ವಚ್ಛತೆಯ ಬಗ್ಗೆ ಏನೋ ಬರೆಯುವ ಪ್ರಯತ್ನದಲ್ಲಿದ್ದೆ. ಮನಸ್ಸು ಹಾಗೆಯೇ ಹಿಂದಕ್ಕೆಳೆಯಿತು. ನಿಜ! ಈಗಿನ ಮಕ್ಕಳಿಗೆ ಯಾವುದು ಪೌಷ್ಟಿಕ ಆಹಾರ, ಯಾವುದು ಹಿತ, ಯಾವುದು ಮಿತ ಎಂದು ಅಳೆದು ಸುರಿದು, ರುಚಿ-ಶುಚಿ ಗಮನಿಸಿ, ನೋಡಲು ಆಸಕ್ತಿ ಬರುವಂತೆಯೂ ಮಾಡಿ ಮಕ್ಕಳು ಚೆನ್ನಾಗಿ ತಿನ್ನುವಂತೆ ಮಾಡಬೇಕಾದ ಸಾಹಸ ಒಂದೆರಡಲ್ಲ. ಅಷ್ಟು ಮಾಡಿದರೂ ಕಡೆಗೆ ಊಟ ತಿಂಡಿ ಮಾಡಿಸಲ...

ಮಳೆಗಾಲಕ್ಕೆ ನಮ್ಮ ಮಕ್ಕಳು ರೇಡಿಯೇ?

ಇಮೇಜ್
ಮಳೆಗಾಲವೆಂದರೆ ತುಂತುರು ಹನಿ, ಮಣ್ಣಿನ ಆಹ್ಲಾದಕರ ವಾಸನೆ, ತಣ್ಣನೆಯ ಗಾಳಿ, ನೋಡಲು ಸುಂದರವಾಗಿ ಕಾಣುವ ತುಂಬಿಕೊಂಡ  ಕೆರೆ-ಕೊಂಡಿಗಳು, ಎಲ್ಲೆಲ್ಲೂ ಹಸಿರು, ಮಳೆಗೆ ಮೈ ಒಡ್ಡಿ ಆಡುವ ಆಟ, ನೀರು ಎರಚಾಟ, ಮಕ್ಕಳಿಗೆ ಪೇಪರ್ ದೋಣಿ ಮಾಡಿ ನೀರಿಗೆ ಬಿಡುವ ಮಜಾ, ಹೊರಗೆ ಮಳೆ ನೀರಿನ ತಟ ಪಟ ಸದ್ದು, ಒಳಗೆ ಬಿಸಿ ಬಿಸಿ ಬಜ್ಜಿ ಮತ್ತು ಕಾಫಿ...ಹೀಗೆ ಮುಂದುರೆಯುತ್ತದೆ ಮಳೆಗಾಲದ ಸಂತಸದ ಕ್ಷಣಗಳ ಪಟ್ಟಿ.. ಅಂತೆಯೇ, ಮಳೆಗಾಲವೆಂದರೆ, ಒಳಗೆ ಎತ್ತಿಟ್ಟಿದ್ದ ಛತ್ರಿ, ರೈನ್ ಕೋಟ್ ಎಲ್ಲ ಹೊರತೆಗೆಯುವ ಸಮಯ, ಒಣಗದ ಬಟ್ಟೆಗಳು, ತಣ್ಣನೆಯ ನೆಲ, ಬೆಂಡಾದ ಬಾಗಿಲುಗಳು, ಹೆಚ್ಚಾದ ಸೊಳ್ಳೆ ಕೀಟಗಳು, ಹಸಿ ಅಂಶದ ಬೂಸ್ಟ್ ಶೇಖರಗೊಂಡ ಗೋಡೆ ಮತ್ತು ಹಾಸಿಗೆಗಳು, ಕೊರೆಯುವ ಚಳಿ, ಮನೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಮಲಗಲು ಅಣಿಯಾಗುವ ಕೆಮ್ಮು ನೆಗಡಿ ಜ್ವರ! ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮಳೆಗಾಲ ಸಮೀಪಿಸಿತೆಂದರೆ ಆಟದ ಜೊತೆಗೆ ಅನಾರೋಗ್ಯದ ಪರದಾಟ!  ಮಳೆಗಾಲದಲ್ಲಿ ಅನಾರೋಗ್ಯ - ಪ್ರಚೋದನಾ ಅಂಶಗಳು :  ಮಳೆಗಾಲ ಶುರುವಾಯಿತೆಂದರೆ ಸಹಜವಾಗಿಯೇ, ವಾತಾವರಣದಲ್ಲಿ ತಾಪಮಾನದ ವ್ಯತ್ಯಾಸ ಉಂಟಾಗುತ್ತದೆ, ಶುಷ್ಕತೆ ಕಡಿಮೆಯಾಗಿ ಎಲ್ಲೆಡೆ ತೇವಾಂಶ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ, ಮಳೆಗಾಲದ ತಂಪಾದ...

ಒಂದು ಚಾಕೊಲೇಟಿನ ಮಹಿಮೆ

ಈ ವರ್ಷದ ಗಣರಾಜ್ಯೋತ್ಸವದ ದಿನದಂದು ನಾನು ಹೈದರಾಬಾದಿನಲ್ಲಿ ನನ್ನ ಅಕ್ಕನ ಮನೆಯಲ್ಲಿದ್ದೆ. ಅವರು ವಾಸವಿರುವ ಟವ್ನ್ ಶಿಪ್ ನಲ್ಲಿ ವಿಜ್ರಂಬಣೆಯ ಗಣರಾಜ್ಯೋತ್ಸವ ಆಚರಣೆ ನಡೆಸಿದ್ದರು. ಆ ಸಮಯದಲ್ಲಿ ನನ್ನ ಪೋಷಕರು,ನಾನು, ನನ್ನ  ಮಗಳು ಸಾನ್ವಿ ಎಲ್ಲರೊಡಗೂಡಿ ಧ್ವಜ ಆರೋಹಣಕ್ಕೆ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟೆವು. ಅಕ್ಕನ ಮಕ್ಕಳು ಮತ್ತು ನನ್ನ ಮಗಳಷ್ಟು ಚಿಕ್ಕ ವಯಸ್ಸಿನವರಿಗೆ ರಾಜ್ಯೋತ್ಸವದ ಬಗ್ಗೆ ಏನು ಕಲ್ಪನೆ ಇರಲು ಸಾಧ್ಯ? ಅವರಿಗೆ ಗೊತ್ತಿದ್ದದ್ದು ಒಂದೇ..ಧ್ವಜಾರೋಹಣದ ನಂತರ ಸ್ವೀಟು ಕೊಡ್ತಾರಂತೆ!! ಅಲ್ಲಿವರೆಗೆ ಸುಮ್ನೆ ಕೂತಿರಬೇಕು ಅಷ್ಟೇ ಅವರ ಮನಸ್ಸಿಗೆ ಹೊಕ್ಕ ವಿಷ್ಯ. ಯಥಾ ಪ್ರಕಾರ ಆಚರಣೆಯು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕೊನೆಗೊಂಡಿತು. ಒಳ್ಳೆ ಪೊಟ್ಟಣದಲ್ಲಿ, ಎರಡು ಅಂಬೊಡೆ ಚಟ್ನಿ, ಜಾಮೂನು ಕೊಟ್ಟಿದ್ದರಿಂದ ಎಲ್ಲರೂ ಬಾಯಲ್ಲಿ ನೀರೂರಿಸಿಕೊಂಡು ಸವಿಯುತ್ತಿದ್ದರು. ನಾವೂ ಕೂಡ ತಲಾ ಒಂದೊಂದು ಪೊಟ್ಟಣವನ್ನು ಕೈಗೆರಿಸಿಕೊಂಡೆವು. ನನ್ನ ಮಗಳು ತನ್ನ ಅಜ್ಜನ ಜೊತೆಗೂಡಿ ಇನ್ನೇನು ಸಿಹಿ ಸವಿಯಬೇಕೆನ್ನುತ್ತಿರುವಾಗಲೇ ಅಲ್ಲೊಬ್ಬ ಪುಟ್ಟ ಹುಡುಗನೊಬ್ಬ ಅವರ ಬಳಿಗೆ ಹೋಗಿ ಚಾಕೊಲೇಟ್ ಒಂದನ್ನು ಸಾನ್ವಿಯ ಕೈಗಿತ್ತು ಇಂದು ತನ್ನ ಹ್ಯಾಪಿ ಬರ್ತಡೆ ಎಂದು ತನ್ನ ಸಂಭ್ರಮವನ್ನು ಹಂಚಿಕೊಂಡ. ಚಾಕೊಲೇಟ್ ಸಿಕ್ಕಿದ್ದೇ ತಡ, ಅವಳ ಕೈಯಲ್ಲಿದ್ದ ಜಾಮೂನು ವಾಪಸು ಅಜ್ಜನ ಕೈಗೆ ಬಂದು ಬಿಟ್ಟಿತು. ಆ ವರೆಗೆ ಕ...

ಮನೆಯೇ ಮೊದಲ ಆಟ ಶಾಲೆ

ಇಮೇಜ್
'ಆಟ' ಎನ್ನುವುದೇ ಒಂದು ಸಂತಸದ ಶಬ್ಧ. ಯಾವ ವಯಸ್ಸಿನ ಮಕ್ಕಳಿಗೆ ಆಗಲಿ ಆಟವಾಡುವುದೆಂದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ. ಆಟ ಯಾವುದೇ ಮಗುವಿನ ಪ್ರಮುಖ ಬೆಳವಣಿಗೆಯ ಪ್ರತೀಕ. ಚಿಕ್ಕ ಶಿಶುವಿನಿಂದ ಹಿಡಿದು ವಯಸ್ಸಾಗಿರುವ ಹಂತದ ವರೆಗೂ ಆಟಗಳು ನಮಗೆ ಮುದವನ್ನು ಕೊಡುತ್ತದೆ. ಮಕ್ಕಳಿಗೆ ಕೆಲವು ಆಟಗಳಿಗೆ ನಮ್ಮ ಸಹಾಯದ ಅವಶ್ಯಕತೆ ಇರುತ್ತದೆ. ಮತ್ತೆ ಕೆಲವು ಆಟಗಳು ಅವರು ತಾವೇ ಆಡಲು ಇಚ್ಚಿಸುತ್ತಾರೆ. ಆದಷ್ಟು ಕುತೂಹಲ ಉಂಟು ಮಾಡುವ ಆಟಗಳು ಮಕ್ಕಳ ಬುದ್ಧಿ ವಿಕಸನವಾಗಲು ಸಹಾಯ ಮಾಡುತ್ತದೆ. ಆಟಗಳ ಬಗ್ಗೆ ಬರಿಯಲಿಚ್ಚಿಸಿದರೆ ಸಾಕಷ್ಟಿದೆ. ಸದ್ಯಕ್ಕೆ ನಾನು ಕೆಲವು ಮನೆಯಲ್ಲಿಯೇ ನಾವು ಆಡಿಸಬಹುದಾದ ಕ್ರಿಯಾತ್ಮಕ ಆಟಗಳ ಒಂದು ಚಿಕ್ಕ ಟಿಪ್ಪಣಿ ಕೊಡಲಿಚ್ಚಿಸುತ್ತೇನೆ. ಈ ಕೆಲವು ಆಟಗಳು ಸುಮಾರು ೧.೫ ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು ೪ ವರ್ಷದ ವರೆಗಿನ ಮಕ್ಕಳಿಗೆ ಆಡಿಸುವಂತದ್ದು. ೧. ಪಾತ್ರೆ, ಲೋಟ, ಕರಡಿಗೆ ಮತ್ತು ಚಮಚಗಳು         ಹೌದು. ಮಕ್ಕಳಿಗೆ ಎಷ್ಟೇ ಆಟದ ಸಾಮಾನು ಇದ್ದರೂ, ಕಡೆಗೆ ಅವರು ಅಡುಗೆ ಮನೆಯ ಕಡೆಗೇ ಹೊರಳುತ್ತಾರೆ. ಕಾರಣ ಇಷ್ಟೇ. ತನ್ನ ಪ್ರೀತಿಪಾತ್ರರು ಸಾಕಷ್ಟು ಸಮಯ ಕಳೆಯುವ ಜಾಗ ಅದು. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳು ಅವರಿಗೆ ಕುತೂಹಲಕಾರಿಯಾಗಿದ್ದಿರುತ್ತದೆ. ಮಕ್ಕಳು ಒಮ್ಮೆಯಾದರೂ ಪಾತ್ರೆ ಸೌಟು ಹಿಡಿದು ಆಟವಾಡಿಯೇ ಆಡುತ್ತಾರೆ. ಅದರಿಂ...

ಮರೆಯಲಾಗದ ಘಟನೆಗಳು...

ಇಮೇಜ್
'ಮರೆಯಲಾಗದ' ಎನ್ನುವುದಕ್ಕಿಂತ ಮರೆಯಲೇ ಇಷ್ಟವಿಲ್ಲದ ಕೆಲವು ಸಂದರ್ಭಗಳನ್ನು ಇಲ್ಲಿ ಬರೆಯಲಿಚ್ಚಿಸುತ್ತೇನೆ. ನನ್ನ ಬ್ಲಾಗ್ನಲ್ಲಿ, ನನ್ನದೇ ಆದ ಜಾಗ ಇರುವುದರಿಂದ ಈ ಕೆಲವು ಘಟನೆಗಳನ್ನು ಶೇಖರಿಸಿಡಲೇನು ಅಡ್ಡಿ ನನಗೆ?? ಹಂಚಿಕೊಳ್ಳುತ್ತಿದ್ದೇನೆ, ಭಾವನೆಗಳು ಇಮ್ಮಡಿಗೊಳ್ಳಲಿ ಎಂದು :) :) ಘಟನೆ ೧.       ಮಗಳನ್ನು ಅವಳ ಪ್ಲೇ ಹೋಂ ಗೆ ಕರೆದುಕೊಂಡು ಹೋಗುವ ಸಂದರ್ಭ. ಸಾನ್ವಿಗೆ ಆಗ ೨ ವರ್ಷ ೩ ತಿಂಗಳು  ಇದ್ದಿತ್ತೇನೋ. ಹೋಗುವ ದಾರಿ ಬದಿಯಲ್ಲಿ ಕೆಲವೊಂದು ಕಡೆ ಇರುವ ಮರಗಳ ನೆರಳು ಬೀಳುವ ಜಾಗ ಅವಳಿಗೆ ಹಾಯ್ ಎನಿಸುತ್ತಿತ್ತೇನೋ.. ಸುಡು ಬಿಸಿಲಿಗೆ ಬಂದ ತಕ್ಷಣ, "ಅಮ್ಮಾ , ಬಿಸ್ಲು ..." ಎಂದಳು. ಎಷ್ಟಂದರೂ ಅಮ್ಮ ಅಲ್ಲವೇ, ಮಗಳೇ ನೆರಳಿಗೆ ಬಾ ಎಂದು ಸೂಚನೆ ನೀಡಿದೆ. ಸರಿ ಆ ಮರದ ನೆರಳೆನೋ ಮುಗಿಯಿತು, ಮತ್ತೆ ಮುಂದೆ ಸ್ವಲ್ಪ ಹಾದಿ ಬಿಸಿಲು. ಬಿಸಿಲು ನೆರಳುಗಳ ಅನುಭವದ ವ್ಯತ್ಯಾಸ ಸರಿಯಾಗಿ ತಿಳಿದ ಅವಳು ನಂತರದಲ್ಲಿ ಹೇಳಿದ ಎರಡು ಸಾಲು, ನನ್ನಲ್ಲಿ ದಿಗ್ಭ್ರಮೆ ಮೂಡಿಸಿತು. "ಅಮ್ಮಾ, ಬಿಸ್ಲು.. ಇಲ್ಲೆಲ್ಲಾ ಯಾಕೆ ಮರ ಇಡಲ್ಲೇ ನೀನು?? ಜಾಸ್ತಿ ಮರ ತಪ್ಪನ ಅಡ್ಡಿಲ್ಯಾ ?? ಅವಾಗ ಬಿಸ್ಲು ಹೋಗ್ತು". (ಒಹ್! ನಮಗೆ ಈ ವಿಷಯ ತಿಳಿದೇ ಇರಲಿಲ್ಲವಲ್ಲ..!!!) ಘಟನೆ ೨.        ಮನೆಯ ಬಾಲ್ಕನಿ ಇಂದ ಹೊರಗಡೆ ನೋಡುತ್ತಾ ಇ...