ಮಹಾಕುಂಭ - ಪಾಂಟೂನ್ ಸೇತುವೆ (ತೇಲುವ ಅದ್ಭುತ)
ಪ್ರಪಂಚದ ಅತಿದೊಡ್ಡ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಮಾರಂಭ - ಮಹಾಕುಂಭಮೇಳದಲ್ಲಿ, ಸಂಗಮ್ ಮತ್ತು 4,000 ಹೆಕ್ಟೇರ್ 'ಅಖಾಡಾ' ಪ್ರದೇಶಗಳ ನಡುವೆ, ಸಂಗಮದ ಎರಡೂ ಭಾಗಗಳಾದ ಝುಸಿ ಮತ್ತು ನಾಗವಾಸುಕಿ ಪ್ರದೇಶಗಳ ಜೋಡಣೆ ಮಾಡಬೇಕಿತ್ತು. ಈ ಒಂದು ಕಾರ್ಯಕ್ಕೆ ಪ್ರಮುಖ ಕೊಂಡಿಯಾಗಿ, ಲಕ್ಷಾಂತರ ಯಾತ್ರಿಕರು, ಸಾಧುಗಳು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿರುವ ಒಂದು ಸರ್ವಶ್ರೇಷ್ಠ ರಚನೆ, ಪಂಟೂನ್ಸ್ ಸೇತುವೆಗಳು!
2,500 ವರ್ಷಗಳಷ್ಟು ಹಳೆಯದಾದ ಪರ್ಷಿಯನ್ ತಂತ್ರಜ್ಞಾನದಿಂದ ಪ್ರೇರಿತವಾಗಿ, ನಿರ್ಮಿಸಲ್ಪಟ್ಟ ಪಾಂಟೂನ್ ಸೇತುವೆಗಳು, ಮಹಾ ಕುಂಭದಲ್ಲಿ 25 ಮುಖ್ಯ ವಲಯಗಳನ್ನು ಸಂಪರ್ಕಿಸುತ್ತದೆ. ಕುಂಭಮೇಳಕ್ಕಾಗಿ ನಿರ್ಮಿಸುವ 'ತಾತ್ಕಾಲಿಕ ನಗರಿ' ಯಲ್ಲಿ ನಿರ್ಮಿಸಿರುವ ಕಿಲೋಮೀಟರ್ಗಟ್ಟಲೆ ಉದ್ದದ ೩೦ ಬ್ರಹತ್ ಸೇತುವೆಗಳೂ ಕೂಡ ತಾತ್ಕಾಲಿಕ ಎಂದರೆ ನಂಬಲಸಾಧ್ಯ!
2,213 ದೈತ್ಯಾಕಾರದ ಕಪ್ಪು ತೇಲುವ ಕಬ್ಬಿಣದ ಕ್ಯಾಪ್ಸುಲ್ಗಳನ್ನು ಬಳಸಿ 1,000 ಕ್ಕೂ ಹೆಚ್ಚು ಜನರು ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ಶ್ರಮ ವಹಿಸಿ ಕೆಲಸ ಮಾಡಿದ್ದಾರಂತೆ ಸೇತುವೆಗಳನ್ನು ಮತ್ತಷ್ಟು ಸ್ಥಿರಗೊಳಿಸಲು ದಪ್ಪ ಮರದ ಹಲಗೆಗಳು, ಮರಳು ಮಣ್ಣು ಮತ್ತು ಕಬ್ಬಿಣದ ಶೀಟುಗಳನ್ನು ಹಾಕಿದ್ದಾರೆ. ಒಂದೊಂದು ಸೇತುವೆಯೂ ತೇಲುವ ಅದ್ಭುತವೇ! ಮತ್ತಿದು ಇಲ್ಲಿಯವರೆಗಿನ ಅತಿದೊಡ್ಡ ಯೋಜನೆ ಎನ್ನುತ್ತಾರೆ. ಮಹಾ ಕುಂಭದ ನಂತರ, ಈ ಸೇತುವೆಗಳನ್ನು ಡಿಸ್ಅಸೆಂಬಲ್ ಮಾಡಿ ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಲಾಗುತ್ತದೆ ಅವಶ್ಯಕತೆ ಇದ್ದಲ್ಲಿ ತಾತ್ಕಾಲಿಕ ಸೇತುವೆಗಳ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಾರೆ. ಐದು ಟನ್ನುಗಳಷ್ಟು ತೂಕ ತಡೆದುಕೊಳ್ಳಬಲ್ಲುದಂತೆ. ಇದೊಂದೇ ಸಾಕು ಕುಂಭಮೇಳದ ಅಭೂತ ತಯಾರಿಯ ಸಾಕ್ಷಿಗೆ!
ಯಾವ ಸ್ಥಳದಲ್ಲಿ ಇಂತಹ ಬ್ರಹತ್ ಕುಂಭ ಮೇಳ ನಡೆಯುತ್ತಿದ್ದೆಯೋ ಅದೂ ಕೂಡ ಶಾಶ್ವತ ಜಾಗವಲ್ಲ! ಅಂದರೆ, ಮಳೆಗಾದಲ್ಲಿ ಸಂಗಮದ ನದಿ ಈ ಜಾಗವನ್ನೂ ಕೂಡ ಅವರಿಸಿಯಾಗಿರುತ್ತದೆ. ಇಂತಹದೊಂದು ಅದ್ಭುತ ತಾತ್ಕಾಲಿಕ ನಾಗರಿಯೊಂದು ಅಲ್ಲಿತ್ತು ಎಂಬ ಕುರುಹೇ ಇಲ್ಲದಂತೆ ನೀರು ಹರಿಯುತ್ತಿರುತ್ತದೆ. ದಾರಾಗಂಜ್ ನ ಶಾಸ್ತ್ರಿ ಸೇತುವೆಯಿಂದ ಒಮ್ಮೆ ಕೆಳನೊಡಿದರೆ, ಈ ೩೦ ಸೇತುವೆಗಳ ನಿರ್ಮಾಣದ ದೃಶ್ಯ ಅದ್ಭುತವಾಗಿ ಕಾಣುತ್ತದೆ. ಮಹಾಕುಂಭಮೇಳಕ್ಕೆ ಹೋಗಿ ಇಂತಹ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಂಡು ಬರುವುದು ಸಾರ್ಥಕವೆನಿಸುತ್ತದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ